ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

  • Access to Knowledge

Omshivaprakash,Tejas Jain

3 November 2014

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ.

The article by Omshivaprakash and Tejas Jain was published in ನನ್ ಮನ on November 1, 2014.


ನಿರಂಜನ (೧೯೨೪-೧೯೯೨) , ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಅವರ ಸುಮಾರು ಐದು ದಶಕಗಳ ಸಂಮೃದ್ಧವಾದ ಕೃತಿಗಳು ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.

ನಿರಂಜನರ ಒಟ್ಟು ೫೫ ಕೃತಿಗಳು ಮರುಪ್ರಕಟಗೊಳ್ಳಲಿವೆ. ಇದು CC-BY-SA 4.0 ಪರವಾನಗಿಯೊಂದಿಗೆ ಭಾರತೀಯ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿರುವ ಒಬ್ಬನೇ ಲೇಖಕನ ಕೃತಿಗಳ ಅತಿ ದೊಡ್ಡ ಸಂಗ್ರಹವಾಗಿರಬಹುದು. ಇದನ್ನು ಆಚರಿಸಲು ಒಂದು ಔಪಚಾರಿಕ ಕಾರ್ಯಕ್ರಮವನ್ನು, ಕ್ರಿಯೇಟೀವ್ ಕಾಮನ್ಸ್ ಪಾಮುಖ್ಯತೆಯ ಬಗ್ಗೆ ಒಂದು ಅಭಿಶಿಕ್ಷಣದ ಜೊತೆಯಲ್ಲಿ ೨೦೧೪ನೇ ನವೆಂಬರ್ ತಿಂಗಳಿನ ಮೊದಲ ವಾರದಲ್ಲಿ ನೆಡೆಸಲು ಯೋಚಿಸುತ್ತಿದ್ದೇವೆ. ಕಾರ್ಯಕ್ರಮದ ಕರಾರುವಾಕ್ಕಾದ ವಿವರಗಳನ್ನು ಸಧ್ಯದಲ್ಲೇ ಹಚಿಕೊಳ್ಳಲಾಗುವುದು.ಕನ್ನಡ ವಿಕಿಪೀಡಿಯ ಬಳಗ ಮತ್ತು ಸಿಐಎಸ್-ಎ೨ಕೆಯು ನಿಮ್ಮನ್ನು ಸಮಾರಂಭದಲ್ಲಿ ನೋಡಲು ಸಂತಸಪಡುತ್ತದೆ. ಕೆಳಗಿನ ಪುಸ್ತಕಗಳು  CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲು ಸಿಐಎಸ್-ಎ೨ಕೆಯ ಸಲಹೆಗಾರರೂ ಆಗಿರುವ ತೇಜಸ್ವಿನಿ ನಿರಂಜನರ ಮಹತ್ತರವಾದ ಆರಂಭಿಕ ಕೆಲಸವನ್ನು ನಾವು ಸ್ಮರಿಸುತ್ತೇವೆ.

ಲೇಖನದ ಕನ್ನಡ ಅನುವಾದ: ತೇಜಸ್ ಜೈನ್

ಚಿತ್ರ, ಇನ್ಫೋಬಾಕ್ಸ್ ಮತ್ತು ಇತರೆ ಮಾಹಿತಿ ಮೂಲ: ಕನ್ನಡ ವಿಕಿಪೀಡಿಯ

About the Authors

OmShivaprakash and Tejas Jain are long time Kannada Wikimedians and enthusiasts of free and open knowledge in Kannada.

Related Events

Sorted By Date

Telecom

Judicial Trends: How Courts Applied the Proportionality Test

This is the second in a series of essays aimed at studying the different ways in which apex courts have evaluated national biometric digital ID programs of their countries.

Event

23 March 2024
Read more

Access to Knowledge

Information Disorders & their Regulation

The Indian media and digital sphere, perhaps a crude reflection of the socio-economic realities of the Indian political landscape, presents a unique and challenging setting for studying information disorders.

Event

5 MB
Read more

Digital Cultures

Security of Open Source Software

A Survey of Technical Stakeholders’ Perceptions and Actions

Event

2.5 MB
Read more

Access to Knowledge

Global Accessibility Awareness Day 2017

The Centre for Internet & Society along with Prakat Solutions and Mitra Jyothi is co-hosting the Global Accessibility Awareness Day in Bengaluru on May 18, 2017.

Event

18 May 2017
Read more